ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಇದ್ದಾಗ, ಕನ್ನಡ ಚಿತ್ರರಂಗದಿಂದ ಒಬ್ಬರಾದ ಮೇಲೆ ಒಬ್ಬರು ಜೈಲಿಗೆ ತೆರೆಳಿ ಅಡ್ಡಡ್ಡ ಬಿದ್ದು ಬಂದಿದ್ದರು. ಕೆಲವರು ತಮ್ಮಿಂದ ಸಹಾಯ ಪಡೆದು ಕಷ್ಟಕಾಲದಲ್ಲಿ ನೋಡಲು ಬರಲಿಲ್ಲ ಎಂದು ದರ್ಶನ್ ಅಂದುಕೊಂಡರೆ ಎಂಬ ಭಯದಲ್ಲಿ ದರ್ಶನ ಪಡೆದು ಬರುತ್ತಿದ್ದಾರೆ. ಮತ್ತೂ ಕೆಲವರು ದರ್ಶನ್ ಹೊರ ಬಂದ ಮೇಲೆ ಯಾರೆಲ್ಲ ಬಂದಿಲ್ಲ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿಕೊಂಡು ತಿನ್ನುವ ಅನ್ನಕ್ಕೆ ಕಲ್ಲು ಹಾಕಿದರೆ ಏನು ಗತಿ ಎಂದು ಹೆದರಿಕೊಂಡು ಕೂಡ ಹೋಗಿ ನೋಡಿಕೊಂಡು ಬಂದರು. ಇನ್ನೂ ಜೈಲಿಗೆ ಹೋಗಲು ಸಾಧ್ಯವಾಗದೇ ಇದ್ದವರು ಕೊನೆ ಪಕ್ಷ ಮಾತನಾಡುವ ಮೂಲಕ ಬೆಂಬಲವನ್ನೂ ನೀಡಲಿಲ್ಲವಲ್ಲ ಎಂದು ದರ್ಶನ್ ಹಲ್ಲಲ್ಲು ಕಡಿದರೆ ಎಂಬ ಭಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ದರ್ಶನ್ ಪರ ವಕಾಲತ್ತು ವಹಿಸಿದರು. ದರ್ಶನ್ ಅವರ ಹೃದಯವಂತಿಕೆ ಮತ್ತು ನೇರವಂತಿಕೆಯ ಗುಣಗಾನವನ್ನು ಮಾಡಿದರು. ಆ ಪೈಕಿ ಯಮುನಾ ಶ್ರೀನಿಧಿ ಕೂಡ ಒಬ್ಬರು.